ಜಪ್ಪಯ್ಯ ಪ್ರಶ್ನೆಗೆ ನಾಗೇಶ್ ಮೈಸೂರು ಅವರು ಕಳಿಸಿದ ಉತ್ತರ ಇಲ್ಲಿದೆ. ಧನ್ಯವಾದ ನಾಗೇಶ್ ಅವರೆ.

ಜಪ್ಪಯ್ಯ ಅನ್ನುಗೆ ಎರಡು ಅರ್ಥ :
- ಅಗ್ರಹ ಪೂರ್ವಕವಾಗಿ ಕೇಳು, ಒತ್ತಾಯ ಮಾಡು
ಇಲ್ಲಿ ಜಪ್ಪಯ್ಯ = ಜಪ್ಪು (ಹೊಡೆದು ಬಡಿದರು) + ಅಯ್ಯಾ (ಅಯ್ಯಾ ಅಂತ ಬೇಡಿಕೊಂಡರು) = ಹೊಡೆದು ಬಡಿದರು ಸರಿ, ಬೇಡಿಕೊಂಡರೂ ಸರಿ, ಜಗ್ಗುವುದಿಲ್ಲ ಅನ್ನೊ ಭಾವ ಕಾಣಬಹುದು.
- ಜಪ್ಪಯ್ಯ ಅನ್ನು = ಸ್ವಲ್ಪ ಮಟ್ಟಿಗಾದರು ಸೋಲು , ತಗ್ಗು, ನಿರ್ಧಾರದಿಂದ ಕದಲು
ಇಲ್ಲಿ ಜಪ್ಪಯ್ಯ = ಜಪ (ಪದೆ ಪದೆ ಕೇಳಿಕೊ, ಜಪದ ತರ) + ಅಯ್ಯಾ (ದೈನ್ಯದಿಂದ ಬೇಡಿಕೊ) = ದೈನ್ಯದಿಂದ ಪದೆ ಪದೆ ಕರುಣೆಗಾಗಿ ಬೇಡಿಕೊಂಡರೂ ಸರಿ ಒಪ್ಪುವುದಿಲ್ಲ ಅನ್ನೊ ಭಾವ
P.S: ಇದೇ ತರದಲ್ಲೊ ದಮ್ಮಯ್ಯ ಕೂಡ : 🙂
ದಮ್ಮು + ಅಯ್ಯಾ = ಉಸಿರು ಕಟ್ಟಿ (ದಮ್ಮು ಕಟ್ಟಿ) ಬೇಡಿಕೊಂಡರು , ಉಸಿರೆ ನಿಂತು ಹೋಗುವ ಹಾಗೆ ಬೇಡಿಕೊಂಡರು (ನಿರಂತರವಾಗಿ, ಎಡಬಿಡದೆ, ಒಂದೆ ಉಸಿರಲ್ಲಿ ಬೇಡಿದ ಹಾಗೆ)
ನಾಗೇಶ್ ಅವರ ಬ್ಲಾಗ್ ಇಲ್ಲಿದೆ