ವಿಷಯಕ್ಕೆ ಹೋಗು

ಮುಖ್ಯ ಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Image

ಕನ್ನಡ ವಿಕಿಪೀಡಿಯ ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ
ಈ ವಿಶ್ವಕೋಶ ಬಹು ಭಾಷೆಗಳಲ್ಲಿ ಲಭ್ಯವಿದೆ.
ಪ್ರಸ್ತುತ ಕನ್ನಡ ಆವೃತ್ತಿಯು ೩೪,೧೭೪ ವಿಷಯಗಳ ಕುರಿತಾದ ಪುಟಗಳನ್ನು ಹೊಂದಿದೆ.

ವಿಶೇಷ ಸೂಚನೆ: ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲಿ ಮಾತ್ರ ಬರೆಯಿರಿ.
ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQ)

ವಿಶೇಷ ಲೇಖನ

Image
ಕನ್ನಡ ಅಕ್ಷರಮಾಲೆ 'ಅ'
ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದು ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದು ಕರೆಯಲಾಗುತ್ತದೆ. ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾ ವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ.

ನಮ್ಮ ಹೊಸ ಲೇಖನಗಳಿಂದ...


ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:

  • ಬಿ.ಆರ್.ಮಾಣಿಕ್ಯಮ್(1909–1964) ಕರ್ನಾಟಕದ ಮೊದಲ ನಗರ ಯೋಜನಾ ನಿರ್ದೇಶಕರಾಗಿ, ರಾಜ್ಯದ ಮೂಲಸೌಕರ್ಯ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಅತ್ಯಂತ ಪ್ರಸಿದ್ಧ ಸಾಧನೆಯೆಂದರೆ ಕರ್ನಾಟಕದ ಶಾಸಕಾಂಗ ಭವನವಾದ ಭವ್ಯವಾದ ವಿಧಾನಸೌಧದ ವಿನ್ಯಾಸ.
  • ವಂಶವೃಕ್ಷ_(ಕಾದಂಬರಿ) ೧೯೬೫ರಲ್ಲಿ ಬಿಡುಗಡೆಯಾದ ಡಾ. ಎಸ್‌.ಎಲ್. ಭೈರಪ್ಪನವರ ಕನ್ನಡ ಕಾದಂಬರಿ. ಸಮಾಜದ ಕಟ್ಟು ಪಾಡನ್ನು ಮುರಿದು ಹೊಸ ಜೀವನಕ್ಕೆ ನಾಂದಿ ಹಾಡುವ ಸಶಕ್ತ ಪಾತ್ರಗಳಿಂದ, ಖ್ಯಾತಿ ಪಡೆದ ಕೃತಿ.
  • ಕಪ್ಪು ಶಿಲೀಂಧ್ರ ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂದ್ರ) ಎನ್ನುವುದು ಶಿಲೀಂದ್ರಗಳಿಂದ ಉಂಟಾಗುವ ಸೋಂಕು. ಸಾಮಾನ್ಯವಾಗಿ ಮಣ್ಣು, ಹಳೆಯ ಕಟ್ಟಡಗಳ ಮೇಲೆ ಒದ್ದೆಯಾದ ಗೋಡೆಗಳು ಇತ್ಯಾದಿಗಳಿಂದ ಈ ಸೋಂಕು ಹರಡುತ್ತದೆ.
  • ಅಭಿನಂದನ್ ವರ್ಧಮಾನ್ ೨೦೧೯ರ ಫೆಬ್ರವರಿ ೨೬ರಂದು ಭಾರತೀಯ ವಾಯುಸೇನೆಯು ಬಾಲಕೋಟ್ ಭಯೋತ್ಪಾದಕ ಶಿಬಿರದ ಮೇಲೆ ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ಭಾರತೀಯ ಸೇನಾನೆಲೆಗಳ ಮೇಲೆ ಪಾಕಿಸ್ತಾನದ ವಾಯುಸೇನೆಯು ೨೭ನೇ ಫೆಬ್ರವರಿ ೨೦೧೯ರಂದು ವಿಫಲ ದಾಳಿಯನ್ನು ನಡೆಸಿದ ಸಂದರ್ಭದಲ್ಲಿ, ಪಾಕ್ ಯುದ್ಧವಿಮಾನವನ್ನು ಅಟ್ಟಿಸಿಕೊಂಡು ಹೋಗಿ, ಪಾಕಿ ವಾಯುಸೇನೆಯ, ಅಮೇರಿಕಾ ನಿರ್ಮಿತ ಎಫ್- ೧೬ ವಿಮಾನವನ್ನು, ಮಿಗ್-೨೧ ಬೈಸನ್ ವಿಮಾನದ ಸಹಾಯದಿಂದ ಹೊಡೆದುರುಳಿಸಿದ ಸಾಹಸಿ ಸೈನಿಕ.
  • ಕೊವ್ಯಾಕ್ಸಿನ್ (ಅಧಿಕೃತ ಹೆಸರು ಬಿಬಿವಿ೧೫೨) ಕೊರೊನಾ ವೈರಸ್ ಖಾಯಿಲೆಯ ಉಪಶಮನಕ್ಕಾಗಿ ನೀಡಲಾಗುವ ಒಂದು ಲಸಿಕೆ. ಇದನ್ನು ನಿಷ್ಕ್ರಿಯಗೊಳಿಸಿದ ವೈರಸ್ಸಿನ ಸಹಾಯದಿಂದ ತಯಾರಿಸಲಾಗಿದ್ದು, ಭಾರತ್ ಬಯೋಟೆಕ್ ಸಂಸ್ಥೆಯು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
  • ಸಿಗಡಿ ಕೃಷಿಯು ಮನುಷ್ಯನ ಆಹಾರಕ್ಕಾಗಿ ಜಲಚರಗಳನ್ನು ಸಾಕುವ ಉದ್ಯಮವಾಗಿದೆ. ಸಿಗಡಿ ಕೃಷಿಯು ಆಗ್ನೇಯ ಏಷಿಯಾದಲ್ಲಿ ಸಾಂಪ್ರದಾಯಿಕ ಸಣ್ಣ ಪ್ರಮಾಣದ ಉದ್ದಿಮೆಯಾಗಿ ಆರಂಭವಾಗಿ, ಇಂದು ಜಾಗತಿಕ ಉದ್ದಿಮೆಯೆನ್ನುವ ಮಟ್ಟಕ್ಕೆ ಬೆಳೆದಿದೆ.
  • ವರಾಹ ಉಪನಿಷತ್ತು೧೩ ನೇ ಮತ್ತು ೧೬ ನೇ ಶತಮಾನದ ನಡುವೆ ಸಂಯೋಜಿಸಲ್ಪಟ್ಟ ಹಿಂದೂ ಧರ್ಮದ ಒಂದು ಚಿಕ್ಕ ಉಪನಿಷತ್ ಆಗಿದೆ. ಇದನ್ನು ಸಂಸ್ಕೃತದಲ್ಲಿ ರಚಿಸಲಾಗಿದೆ ಹಾಗೂ ಇದನ್ನು ಕೃಷ್ಣ ಯಜುರ್ವೇದದ ೩೨ ಉಪನಿಷತ್ತುಗಳಲ್ಲಿ ಒಂದೆಂದು ಪಟ್ಟಿ ಮಾಡಲಾಗಿದೆ ಮತ್ತು ೨೦ ಯೋಗ ಉಪನಿಷತ್ತುಗಳಲ್ಲಿ ಒಂದೆಂದು ವರ್ಗೀಕರಿಸಲಾಗಿದೆ.

ಸುದ್ದಿಯಲ್ಲಿ

Image
ಸಾಲುಮರದ ತಿಮ್ಮಕ್ಕ
  • ನವೆಂಬರ್ ೧೪: "ವೃಕ್ಷಮಾತೆ" ಎಂದು ಹೆಸರುವಾಸಿಯಾದ ಸಾಲುಮರದ ತಿಮ್ಮಕ್ಕ ತಮ್ಮ ವಯೋಸಹಜ ಅಸ್ವಸ್ಥತೆಯಿಂದ ನಿಧನ ಹೊಂದಿದರು. [೧]
  • ಅಕ್ಟೋಬರ್ ೨೨: ದೀಪಾವಳಿಗೆ ದೇಶದಾದ್ಯಂತ ೬.೦೫ ಲಕ್ಷ ಕೋಟಿ ಮೊತ್ತದ ವ್ಯವಹಾರ ದಾಖಲು, ವ್ಯಾಪಾರಕ್ಕೆ ಉತ್ತೇಜನ ನೀಡಿದ ಜಿಎಸ್‌ಟಿ ಇಳಿಕೆ[೨]
  • ಅಕ್ಟೋಬರ್ ೨೨: ಮೆಹುಲ್ ಚೋಕ್ಸಿ ಗಡಿಪಾರಿಗೆ ಬೆಲ್ಜಿಯಂ ಕೋರ್ಟ್ ಅನುಮೋದನೆ[೩]
  • ಅಕ್ಟೋಬರ್ ೧೯:ಮಹಿಳಾ ವಿಶ್ವಕಪ್ ೨೦೨೫-ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 4 ರನ್‌ಗಳ ಸೋಲು, ಸೆಮಿ ಪ್ರವೇಶಿಸಲು ನ್ಯೂಝೀಲ್ಯಾಂಡ್ ಮತ್ತು ಬಾಂಗ್ಲಾ ತಂಡಗಳ ವಿರುದ್ಧ ಗೆಲುವು ಅನಿವಾರ್ಯ[೪]
  • ಅಕ್ಟೋಬರ್ ೧೭: ಫೀಫಾ ಶ್ರೇಣಿಯಲ್ಲಿ ೧೩೯ನೇ ಸ್ಥಾನಕ್ಕೆ ಕುಸಿದ ಭಾರತ ಫುಟ್‍ಬಾಲ್ ತಂಡ[೫]


ಈ ತಿಂಗಳ ಪ್ರಮುಖ ದಿನಗಳು

ಡಿಸೆಂಬರ್:

ಎನ್ಸೈಕ್ಲೊಪೀಡಿಯ ಬ್ರಿಟಾನಿಕ

ವಿಕಿಪೀಡಿಯ ಪರ್ಯಟನೆ

Image ಕರ್ನಾಟಕ ಮತ್ತು ಕನ್ನಡ

ಜಿಲ್ಲೆಗಳುತಾಲ್ಲೂಕುಗಳುಪ್ರಮುಖ ಸ್ಥಳಗಳುಇತಿಹಾಸಮುಖ್ಯಮಂತ್ರಿಗಳುಪ್ರಸಿದ್ಧ ವ್ಯಕ್ತಿಗಳುಬೆಂಗಳೂರುಕನ್ನಡ ವ್ಯಾಕರಣಕನ್ನಡ ಪತ್ರಿಕೆಗಳು

Image ಭೂಗೋಳ

ಭೂಗೋಳಖಂಡಗಳುದೇಶಗಳುನಗರಗಳುಜಲಸಮೂಹಗಳುಪರ್ವತಶ್ರೇಣಿಗಳುಮರುಭೂಮಿಗಳುಭೂಗೋಳ ಶಾಸ್ತ್ರಸೌರಮಂಡಲಖಗೋಳಶಾಸ್ತ್ರ

Image ಕಲೆ ಮತ್ತು ಸಂಸ್ಕೃತಿ

ಸಂಸ್ಕೃತಿಭಾಷೆಗಳುಸಾಹಿತ್ಯಸಾಹಿತಿಗಳುಸಂಗೀತಸಂಗೀತಗಾರರುಧರ್ಮಜಾನಪದಹಬ್ಬಗಳುಕ್ರೀಡೆಪ್ರವಾಸೋದ್ಯಮರಂಗಭೂಮಿಚಿತ್ರರಂಗಪ್ರಾಚ್ಯ ಸಂಶೋಧಕರು

Image ಜನ - ಜೀವನ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರುನೊಬೆಲ್ ಪ್ರಶಸ್ತಿ ಪುರಸ್ಕೃತರುಸ್ವಾತಂತ್ರ್ಯ ಹೋರಾಟಗಾರರುಭಾರತ ರತ್ನ ಪುರಸ್ಕೃತರುಜ್ಞಾನಪೀಠ ಪ್ರಶಸ್ತಿ ಪುರಸ್ಕೃತರುಉದ್ಯಮಿಗಳು ಉದ್ಯಮಗಳು

Image ಇತಿಹಾಸ

ಇತಿಹಾಸಐತಿಹಾಸಿಕ ಸ್ಥಳಗಳು-ಸ್ಮಾರಕಗಳುವಿಶ್ವ ಪರಂಪರೆಯ ತಾಣಗಳುಭಾರತದ ಇತಿಹಾಸಕಾಲ

Image ವಿಜ್ಞಾನ ಮತ್ತು ತಂತ್ರಜ್ಞಾನ

ವಿಜ್ಞಾನತಂತ್ರಜ್ಞಾನತಂತ್ರಜ್ಞರುವಿಜ್ಞಾನಿಗಳುಖಗೋಳಶಾಸ್ತ್ರಜೀವಶಾಸ್ತ್ರರಸಾಯನಶಾಸ್ತ್ರಭೂಶಾಸ್ತ್ರಭೌತಶಾಸ್ತ್ರಗಣಿತ

Image ಧರ್ಮ ಮತ್ತು ಆಧ್ಯಾತ್ಮಿಕತೆ

ಧರ್ಮಆಧ್ಯಾತ್ಮಹಿಂದೂ ಧರ್ಮಜೈನ ಧರ್ಮಬೌದ್ಧ ಧರ್ಮಇಸ್ಲಾಂ ಧರ್ಮಕ್ರೈಸ್ತ ಧರ್ಮಯಹೂದಿ ಧರ್ಮಸಿಖ್ ಧರ್ಮಧಾರ್ಮಿಕ ಗ್ರಂಥಗಳುಪುರಾಣ

Image ಸಮಾಜ ಮತ್ತು ರಾಜಕೀಯ

ಸಮಾಜರಾಜಕೀಯಶಿಕ್ಷಣಭಾರತದ ರಾಷ್ಟ್ರಪತಿಗಳುಭಾರತದ ಪ್ರಧಾನ ಮಂತ್ರಿಗಳುಸಮಾಜಸೇವಕರುಭಯೋತ್ಪಾದನೆ

Image ಕನ್ನಡ ಸಿನೆಮಾ

ಚಲನಚಿತ್ರಗಳುನಿರ್ದೇಶಕರುನಟರುನಟಿಯರುನಿರ್ಮಾಪಕರುಚಿತ್ರ ಸಂಗೀತಚಿತ್ರಸಾಹಿತಿಗಳು

Image ಮನೋರಂಜನೆ ಮತ್ತು ಕ್ರೀಡೆ

ಕ್ರೀಡೆಕ್ರೀಡಾಪಟುಗಳುಕ್ರೀಡಾ ಪ್ರಶಸ್ತಿಗಳುಕ್ರಿಕೆಟ್ಟೆನ್ನಿಸ್ಪ್ರವಾಸದೂರದರ್ಶನ

Image ಭಾರತದ ಇತರ ಭಾಷೆಗಳಲ್ಲಿ ವಿಕಿಪೀಡಿಯ

ವಿಕಿಮೀಡಿಯ ಬಳಗದ ಇತರ ಯೋಜನೆಗಳು:

ಭಾಷಾ ವಿಷಯ ಯೋಜನೆಗಳು
ಬಹುಭಾಷಾ ವಿಷಯ ಯೋಜನೆಗಳು

ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಆತಿಥೇಯವಹಿಸಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದಯವಿಟ್ಟು ದೇಣಿಗೆ ನೀಡಲು ಈ ಪುಟಕ್ಕೆ ಭೇಟಿ ನೀಡಿ (ದೇಣಿಗೆ ಲಿಂಕ್ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ & ಜಾಲತಾಣ ಆಂಗ್ಲ ಭಾಷೆಯಲ್ಲಿದೆ).