Featured

ಬಗೆಹರಿಯದ ಪ್ರಶ್ನೆ

ಶಾಂಭವಿ. ಎನ್

ಕರಾವಳಿಯ ಶರಾವತಿ ನದಿಯ ತಪ್ಪಲಿನಲ್ಲಿರುವ ಸಣ್ಣ ಹಳ್ಳಿಯೇ ʼಗ್ರೀಶ್ಷ್ಮಾವಳಿʼ. ಹೆಸರಿನಷ್ಟೆ ವಿಚಿತ್ರವಾಗಿರುವುದು ಅಲ್ಲಿನ ಪರಿಸರ. ಇಂದಿಗೆ ಸುಮಾರು ವರ್ಷದ ಹಿಂದಿನ ಕಾಲವದು. ಸ್ವರ್ಗವೇ ಧರೆಗಿಳಿದಂತೆ ಭಾಸವಾಗುವ ಆ ಹಳ್ಳಿಯ ನಿಸರ್ಗ ಸೌಂದರ್ಯಕ್ಕೆ ಬೇರಾವುದೂ ಸಾಟಿಯಿಲ್ಲ. ಸೂರ್ಯನ ಕಿರಣಗಳು ಇರುವಷ್ಟು ಹೊತ್ತು ಸಂಭ್ರಮ. ಆದರೆ ಹೊತ್ತು ಮುಳಿಗಿದ ನಂತರ ಅದು ಬೇರೆಯದೇ ಪ್ರಪಂಚವೆನಿಸುತ್ತದೆ. ಹಗಲಿನ ಬೆಳಕಿನ ಚೈತನ್ಯ ರಾತ್ರಿಯ ನಿಗೂಢತೆಯೊಂದಿಗೆ ಕೊನೆಗೊಳ್ಳುತ್ತದೆ. ಇಂತಹ ಸಣ್ಣ ಹಳ್ಳಿಯಲ್ಲಿ ಪುಟ್ಟ ಮನೆಯಲ್ಲಿದ್ದುದು ಸುಬ್ರಾಯನ ಕುಟುಂಬ. ಹವ್ಯಕ ಬ್ರಾಹ್ಮಣ ಕುಟುಂಬದವನಾದ ಆತ ಅಲ್ಲಿ ತನ್ನದೇ ಚಿಕ್ಕ ಪ್ರಪಂಚವೊಂದನ್ನು ನಿರ್ಮಿಸಿಕೊಂಡಿದ್ದ. ಹೆಚ್ಚೇನು ಆರ್ಥಿಕವಾಗಿ ಸದೃಢನಾಗಿಲ್ಲದಿದ್ದರೂ ಮನೆಯಲ್ಲಿ ಸುಖ, ನೆಮ್ಮದಿಗೆ ಯಾವುದೇ ಕೊರತೆಯಿರಲಿಲ್ಲ. ಎಲ್ಲ ಆತನ ಪ್ರೀತಿಯ ಮಡದಿ, ಸುಬ್ಬಿಯ ಕೈಚಳಕ. ಆಕೆಯ ತಂದೆ ಹದಿನಾರನೇ ವಯಸ್ಸಿಗೆ ಆಕೆಯನ್ನು ಮದುವೆ ಮಾಡಿದ್ದರು. ಆಗಿನ ಕಾಲ ಹಾಗಿತ್ತು. ಮದುವೆಯಾದದ್ದು ಹದಿನಾರನೇ ವಯಸ್ಸಿಗಾದರೂ, ಆಕೆಯನ್ನು ಶಾಲೆಯಿಂದ ಬಿಡಿಸಿದ್ದು ನಾಲ್ಕನೇ ಕ್ಲಾಸಿಗೆ. ಮನೆ ತುಂಬಾ ಮಕ್ಕಳು. ಅವರನ್ನೆಲ್ಲಾ ನೋಡಿಕೊಳ್ಳಲು ಮನೆಯ ಹಿರಿಮಗಳಾದ ಸುಬ್ಬಿ ತನ್ನ ವಿದ್ಯೆ ಹಾಗು ಬಾಲ್ಯವನ್ನು ತ್ಯಾಗ ಮಾಡಿದ್ದಳು. ಯಾರೋ ಮಹಾನ್‌ ತೇಜಸ್ವಿ ಅವಳ ತಂದೆಗೆ ಹೇಳಿದ್ದನಂತೆ. ಆಕೆಯ ಕೈಯಲ್ಲಿ ವಿದ್ಯಾ ರೇಖೆ ಬಹಳ ಉದ್ದವಾಗಿದ್ದು, ವಿದ್ಯೆ ಅವಳಿಗೆ ಒಲಿಯುತ್ತೆ. ಮುಂದೆ ಮಾಸ್ತರಣಿ ಆಗುವ ಸಂಭವವಿದೆಯೆಂದು. ಆದರೆ ಅವನಿಗೇನು ಗೊತ್ತು, ಆಕೆ ಶಾಲೆ ಬಿಟ್ಟು ಸುಬ್ರಾಯನ ಮನೆಯಾಕಿಯಾಗುತ್ತಾಳೆಂದು.

‘ಬಡವನಾದರೆ ಏನು ಪ್ರಿಯೆ, ಕೈ ತುತ್ತು ತಿನಿಸುವೆʼ ಎಂದು ಹಾಡಿಕೊಂಡೆ ಸುಬ್ರಾಯ ಸುಬ್ಬಿಯ ಮನಗೆದ್ದಿದ್ದ. ಮನೆಯಲ್ಲಿ ಮೂರು ಸಣ್ಣ ಮಕ್ಕಳ ಕಲರವ. ಅಷ್ಟಾಗಿಯೂ ಅವರ ನಡುವೆ ಪ್ರೀತಿ ಹಾಗೇ ಇತ್ತು. ದಿನವಿಡೀ ಮನೆಯಲ್ಲಿ, ತೋಟದಲ್ಲಿ, ಕೊಟ್ಟಿಗೆಯಲ್ಲಿ ದುಡಿಯುವಾಕೆ ಸುಬ್ಬಿಯಾದರೆ, ಹೊರಗೆ ಹೋಗಿ, ಆಮಂತ್ರಣ ನೀಡಿದ ಕಡೆ ಪೂಜೆ ಪುನಸ್ಕಾರಗಳನ್ನು ಮಾಡಿಸಿ, ಅವರು ನೀಡಿದ ಅಷ್ಟೋ ಇಷ್ಟೋ ಪುಡಿಗಾಸು ಚಿಲ್ಲರೆಯನ್ನು ಸಂಭಾವನೆಯಾಗಿ ಪಡೆದುಕೊಂಡು, ಅವರಿತ್ತ ಅಕ್ಕಿ-ಕಾಯಿಯನ್ನು ಮನೆಗೆ ತಂದುಹಾಕುವವನಾಗಿದ್ದ ಸುಬ್ರಾಯ. ಆತ ಕೆಲಸಕ್ಕೆ ಹೋದರೇನೆ ಮನೆಯಲ್ಲಿ ಒಲೆ ಉರಿಯುತ್ತಿತ್ತು. ಇಲ್ಲವಾದಲ್ಲಿ ಹೊಟ್ಟೆಗೆ ತಣ್ಣಿರ್‌ ಬಟ್ಟೆ. ಹಸಿವನ್ನು ಅಪ್ಪಿಕೊಂಡೇ ಮಲಗಬೇಕಿತ್ತು.

ಸಿಟಿಯಿಂದ ಬಹಳ ದೂರವಿತ್ತು ಆ ಹಳ್ಳಿ. ಏನೇ ಬೇಕಾದರು ಕುದಬೈಲು ಎಂಬ ಪಟ್ಟಣಕ್ಕೆ ಹೋಗಬೇಕಿತ್ತು. ಅದು ಇರುವುದು ಹಳ್ಳಿಯಿಂದ ೪ ಕಿ.ಮೀ ದೂರದಲ್ಲಿ. ಕಾಲಲ್ಲಿ ಶಕ್ತಿ, ಮನಸ್ಸಿನಲ್ಲಿ ಹುರುಪಿದ್ದವರು ಅಷ್ಟು ದೂರ ನಡೆಯಬಹುದಷ್ಟೆ. ಬಸ್ಸು, ಟೆಂಪೋ ಏನು ಸಿಗದ ಜನನಿಬಿಡ ಮಾರ್ಗವದು. ಬೆಳಗ್ಗೆ ಹೊತ್ತೇ ಆ ದಾರಿಯಲ್ಲಿ ಹೋಗಲು ಜನ ಹಿಂಜರಿಯುತ್ತಾರೆ. ಇನ್ನು, ಸಂಜೆ ಅಥವಾ ರಾತ್ರಿ ಹೊತ್ತು ಕೇಳಬೇಕಾ? ತಲೆಯಲ್ಲಿ ಬುದ್ಧಿಯಿರುವವರು ಆ ಯೋಚನೆಗೆ ಸುತಾರಾಂ  ʼಇಲ್ಲʼವೆಂದುಬಿಡುತ್ತಾರೆ.

ಹೀಗೆ ದೀಪಾವಳಿಯ ನರಕಚತುರ್ದಶಿಯ ಮುಂದಿನ ದಿನವಾದ ಅಮಾವಾಸ್ಯೆಯಂದು ಸುಬ್ರಾಯನಿಗೆ ನೀಲಕೋಡು ಎಂಬ ಊರಿನಲ್ಲೊಂದು ಕೆಲಸ ಬಂದೊದಗಿತ್ತು. “ಭಟ್ಟರೆ,ಅಮಾವಾಸ್ಯೆಯಂದು ನಂಗಳ ಮನೆಯಲ್ಲೊಂದು ಶನಿ ಕಥೆ ಮಾಡಿಸಬೇಕು. ನೀವೇ ಮುದ್ದಾಮು ಬಂದು ಮಾಡಿಕೊಡಕ್ಕು” ಎಂದು ಲಕ್ಷ್ಮಣ ಹೆಗಡೆಯವರು ಸುಬ್ರಾಯನಲ್ಲಿ ಕೇಳಿಕೊಂಡಿದ್ದರು. “ಅಡ್ಡಿಲ್ಲೆ, ಹೆಗಡೆಯವರೆ, ನಾ ಬಂದು ಮಾಡಿಕೊಡ್ತೆ” ಎಂದು ಹವ್ಯಕ ಕನ್ನಡ ಭಾಷೆಯಲ್ಲೆ ಸುಬ್ರಾಯನು ಒಪ್ಪಿಗೆ ಸೂಚಿಸಿದ್ದ. ಆ ಭಾಗದಲ್ಲಿ ಎಲ್ಲರೂ ಅದೇ ಭಾಷೆಯಲ್ಲೇ ಮಾತನಾಡುವವರು. ಕೇಳಲಿಕ್ಕೆ ಬಲು ಹಿತವಾದ, ಸೋಜಿಗದ ಕನ್ನಡ ಭಾಷಾ ಶೈಲಿಯದು.

ದೀಪಾವಳಿಯೆಂದರೆ, ಬೆಳಕಿನ ಹಬ್ಬ. ತನ್ನೊಂದಿಗೆ ಹಲವಾರು ಸುಖ ಸಂತೋಷವನ್ನು ತರುವ ʼದೊಡ್ಡʼ ಹಬ್ಬವದು. ಮನೆಯಲ್ಲಿ ದಿನಸಿ ಸಾಮಾನುಗಳು ತುಂಬಿ ತುಳುಕುವ ಸಮೃದ್ಧಿಯ ಸಮಯವದು. ಆದರೆ ಸುಬ್ರಾಯನ ಮನೆಯಲ್ಲಿ ಆ ಪರಿಸ್ಥಿತಿಯಿರಲಿಲ್ಲ. ಹೆಗಡೆಯವರ ಮನೆಯ ಕೆಲಸ ಅಮಾವಾಸ್ಯೆಯಂದಿದ್ದು, ಅಲ್ಲಿಂದ ವಾಪಸ್ಸು ಬರುವಾಗ ಮನೆಗೆ ದಿನಸಿ ಸಾಮಾನುಗಳನ್ನು ಹಾಗು ಮಕ್ಕಳಿಗೆ ಹೊಸ ಅಂಗಿ-ಚಡ್ಡಿಗಳನ್ನು ತರುವುದಾಗಿ ಸುಬ್ರಾಯನು ಸುಬ್ಬಿಯ ಮನವೋಲೈಸಿದ್ದ. ಆ ಶನಿ ದೇವರೇ ಅವನ ಮೇಲೆ ದಯೆ ತೋರಿ ಆ ಕೆಲಸ ಅವನಿಗೆ ಸಿಕ್ಕಿದ್ದಾಗಿ ಆತ ನಂಬಿದ್ದ.

ಎತ್ತಿನ ಗಾಡಿಯ ಚಕ್ರ ಉರುಳಿದಂತೆ ಉರುಳಿಹೋಗುತ್ತದೆ ಸಮಯ. ಅದರಂತೆ, ಅಮಾವಾಸ್ಯೆಯೂ ಬಂತು, ಸುಬ್ರಾಯನ ಪೂಜೆಯೂ ಮುಗಿದಿತ್ತು. ಹೆಗಡೆಯವರು ನೀಡಿದ ಸಂಭಾವನೆಯಿಂದ ಕುದಬೈಲಿಗೆ ಹೋಗಿ ಮನೆಗೆ ಬೇಕಾದ ದಿನಸಿ ಪದಾರ್ಥಗಳನ್ನು ದಿನಕರ ಶೆಟ್ಟಿಯ ಅಂಗಡಿಯಲ್ಲಿ ತೆಗೆದುಕೊಂಡು, ಅಲ್ಲೇ ಹತ್ತಿರದಲ್ಲಿದ್ದ ಗರೀಮ ವಸ್ತ್ರಾಲಯದಿಂದ, ಹೆಂಡತಿ ಮಕ್ಕಳಿಗೆ ಬಟ್ಟೆ ಖರೀದಿಸಿ, ಅವೆಲ್ಲವನ್ನು ಒಂದು ದೊಡ್ಡ ಚೀಲದಲ್ಲಿ ಹಾಕಿಕೊಂಡು ಆ ಮೂಟೆಯನ್ನು ತಲೆಯ ಮೇಲಿರಿಸಿಕೊಂಡು ಮನೆಯ ಹಾದಿ ಹಿಡಿಯುವಷ್ಟರಲ್ಲಿ ರಾತ್ರೆ ಒಂಭತ್ತು ಗಂಟೆಯಾಗಿತ್ತು.

ಕುದಬೈಲಿನಿಂದ ಅವನಿದ್ದ ಗ್ರೀಷ್ಮಾವಳಿಗೆ ಹೋಗಬೇಕಾದರೆ ಒಂದೇ ಉದ್ದನೆಯ ಹಾದಿ. ʼಕುದಬೈಲ್‌ ರೋಡ್‌ʼ ಎಂದು ಕರೆಯುತ್ತಿದ್ದರದಕ್ಕೆ. ಆ ರೋಡು ಬಹಳ ಕಿರಿದಾಗಿದ್ದು , ಅದರ ಎಡ ಬದಿಗೆ ಕೊಳಪೆ ಗುಡ್ಡವಿತ್ತು ಹಾಗು ಬಲಬದಿಗೆ ಕೆಂಡಸಂಪಿಗೆ ಹೊಳೆಯಿತ್ತು. ಆ ಏರು ರಸ್ತೆಯನ್ನು ಆ ಮೂಟೆಯೊಂದಿಗೆ, ಅದೂ ಆ ಕಗ್ಗತ್ತಲಿನಲ್ಲಿ ಹತ್ತುವುದು ಸುಬ್ರಾಯನಿಗೆ ಕಷ್ಟವೆನಿಸಿತು. ಆದರೂ ನಾಳಿನ ಬಲಿಪಾಢ್ಯಮಿ ಹಬ್ಬಕ್ಕಾದರೂ ಮನೆ ಸೇರಿ ಹೆಂಡತಿ ಮಕ್ಕಳಿಗೆ ತಂದ ಉಡುಗೊರೆ ನೀಡಿ ಅವರಿಗೆ ಖುಷಿಪಡಿಸಬೇಕೆಂಬ ಹಂಬಲದಿಂದ ಎಷ್ಟೇ ಕಷ್ಟವಾದರೂ, ಒಬ್ಬನೇ ಆ ಕತ್ತಲಿನಲ್ಲಿ ಹೋಗಬೇಕೆಂದು ಭಯವಾದರು ಮುಂದುವರೆದ. ಬೇರೇ ಯಾವುದೇ ದಿನವಾದರೂ ತಿಂಗಳು ಬೆಳಕಾದರೂ(ಚಂದ್ರನ ಬೆಳಕು) ದಾರಿ ತೋರಲು ಇರುತಿತ್ತು. ಆದರೆ ಆತ ಅಂದು ನಡೆದು ಹೋಗುತ್ತಿದ್ದ ದಿನ ʼಅಮಾವಾಸ್ಯೆʼಯಾಗಿದ್ದರಿಂದ ಅದೂ ಇರಲಿಲ್ಲ.

ಹೀಗೆ ಕತ್ತಲೆಯ ಹಾದಿಯಲ್ಲಿ ನಡೆಯುತ್ತಾ ಸ್ವಲ್ಪ ಹೊತ್ತಾಗಿತ್ತು. ಆಗ ಆ ರೋಡಿನ ಮೇಲಿಂದ ಯಾರೋ ಇಬ್ಬರು ಸೂಡಿ ಹಿಡಿದು ಬರುತ್ತಿದ್ದುದ್ದನ್ನು ಗಮನಿಸಿದ ಸುಬ್ರಾಯ. ಒಣಗಿದ ತೆಂಗಿನ ಗರಿಗೆ ಬೆಂಕಿ ಹಚ್ಚಿ ಅದನ್ನು ಬೆಳಕಿಗಾಗಿ ಬಳಸುವುದನ್ನು ʼಸೂಡಿʼ ಎಂದು ಕರೆಯುತ್ತಾರೆ. ಇಂದಿನ ಒಲಿಂಪಿಕ್‌ ಟಾರ್ಚಿಗೆ ಅದನ್ನು ಹೋಲಿಸಬಹುದಾಗಿದೆ.

Image

ಅಬ್ಬಾ, ಸದ್ಯ! ಆ ದೇವರೇ ತನಗೆ ದಾರಿ ತೋರಲು ಈ ಸೂಡಿ ಹಿಡಿದ ಮನುಷ್ಯರನ್ನು ಕಳಿಸಿರಬೇಕು ಅಂದುಕೊಂಡ ಸುಬ್ರಾಯ. ಆದರೆ ಅ ಸೂಡಿ ಹಿಡಿದ ಮನುಷ್ಯರು ಸ್ವಲ್ಪ ಹತ್ತಿರವಾಗುತ್ತಿದ್ದಂತೆಯೇ ಆತ ಕಂಡಿದ್ದೇ ಬೇರೆ. ಮುಖದ ಮೇಲಿದ್ದ ಶಾಂತಚಿತ್ತತೆ, ಭಯಾನಕ ರಸಕ್ಕೆ ತಿರುಗಿತ್ತು. ಬಿಳೀ ಬಣ್ಣದ ನಿಲುವಂಗಿ ಧರಿಸಿದ ಅವರು ತಲೆಯ ಮೇಲೆ ಗೋಣಿ ಚೀಲ ಹೊದೆದಿದ್ದುಅವರ ಕಾಲು ಕಾಣುವಂತೆ ಇರಲಿಲ್ಲ ಮತ್ತು ಅವರ ಮುಖ ಬಹಳ ಕಪ್ಪಗಿತ್ತು. ಮುಖದಲ್ಲಿರುವ ಕಣ್ಣು, ಮೂಗು, ಬಾಯಿ ಮುಂತಾದ ಯಾವುದೇ ಅಂಗಾಂಗಳು ಕಾಣುವಂತಿರಲಿಲ್ಲ. ಆಗ ಸುಬ್ರಾಯನಿಗೆ ಮತ್ತಷ್ಟು ಹೆದರಿಕೆಯಾಗಲು ಶುರುವಾಯಿತು. ನೋಡನೋಡುತ್ತಿದ್ದಂತೆ ಎಡಬದಿಯ ಕೊಳಪೆ ಬೆಟ್ಟದಿಂದ , ಬಲಬದಿಯ ಕೆಂಡಸಂಪಿಗೆ ಹೊಳೆಯ ಬದಿಯಿಂದ ಹಾಗು ರೋಡಿನ ಕೆಳಬದಿಯಿಂದಲೂ ಕೂಡ ಅದೇ ರೀತಿಯ ಎರಡು ವಿಚಿತ್ರ ಮನುಷ್ಯರೆನಿಸುವ, ಏನೆಂದು ತಿಳಿಯದ ಜೀವಿಗಳು ಬರುತ್ತಿರುವುದು ಕಂಡಿತು. ಆಗ ಸುಬ್ರಾಯನ ಎದೆ ಢವಢವ ಸದ್ದು ಜೋರಾಯಿತು. ಕಣ್ಣು ಮಿಟುಕಿಸುವ ಹೊತ್ತಿನಲ್ಲಿ ಆ ವಿಚಿತ್ರ ಜೀವಿಗಳು ಆತನನ್ನು ಸುತ್ತುವರೆದಿದ್ದವು. ಅವು ವಿಚಿತ್ರ ಜೀವಿಗಳೋ ಅಥವಾ ಜೀವವಿಲ್ಲದ ಮತ್ಯಾವುದೋ ವಿಭಿನ್ನ ಆಕೃತಿಯೋ, ಯಾವುದೂ ಸುಬ್ರಾಯನಿಗೆ ಅರ್ಥವಾಗಲಿಲ್ಲ. ತನ್ನ ಸುತ್ತಲೂ ಏನಾಗುತ್ತಿದೆ? ಇವರೆಲ್ಲ ಯಾರು? ತನ್ನಿಂದೇನಾಗಬೇಕು ಇವರಿಗೆ? ಯಾಕೆ ತನ್ನನ್ನು ಸುತ್ತುವರೆದಿದ್ದಾರೆ ಇವರೆಲ್ಲಾ? ಅಷ್ಟಕ್ಕೂ ಏನಾಗುತ್ತಿದೆಯಿಲ್ಲಿ? ಇವೆಲ್ಲಾ ಆತನ ಮೆದುಳಿನಲ್ಲಿ ಹಾದು ಹೋದ ಪ್ರಶ್ನೆಗಳು. ಇಂದಿಗೂ ಉತ್ತರ ಸಿಗದ ʼಬಗೆಹರಿಯದ ಪ್ರಶ್ನೆಗಳವುʼ.

ಇನ್ನೇನು ಮಾಡಲೂ ತೋಚದ ಸುಬ್ರಾಯ ಆ ಮೂಟೆಯನ್ನು ಹೊತ್ತಿಕೊಂಡೇ ಹಿಂಗಾಲಿನಲ್ಲಿ ಕಣ್ಮುಚ್ಚಿ ತನ್ನ ಮನೆದೇವರ ಧ್ಯಾನ ಮಾಡುತ್ತಾ ಸುಮಾರು ಒಂದು ಕಿಲೋ ಮೀಟರ್‌ ಹಿಂದೆ ಬಂದು ಗಕ್ಕನೆ ಅಂಗಡಿಯ ಮುಂದೆ ಬಂದು ನಿಂತವನಿಗೆ ಒಮ್ಮೆಲೆ ಕಣ್ಣು ತೆರೆಯಬೇಕೆನಿಸಿತು. ಆತ ಸರಿಯಾಗಿ ಕುದಬೈಲು ರಾಂಭಟ್ಟನ ಅಂಗಡಿಯ ಮುಂದೆ ಬಂದು ನಿಂತಿದ್ದ. ಮೈಯೆಲ್ಲ ಹೊಳೆಯಲ್ಲಿ ಮಿಂದೆದ್ದಂತೆ ಬೆವರಿನಲ್ಲಿ ತೊಯ್ದುಹೋಗಿತ್ತು.

ಸುಬ್ರಾಯನ್ನು ಈ ಪರಿಸ್ಥಿತಿಯಲ್ಲಿ ಕಂಡ ರಾಂಭಟ್ಟ, “ಅರೇ, ಸುಬ್ರಾಯ ಭಟ್ಟರು, ಇದೆಂತ ಇಷ್ಟು ರಾತ್ರೇಲಿ ನೀವಿಲ್ಲಿ? ಇದೆಂತಾ ನಿಮ್ಮ ಅವಸ್ಥೆ?” ಎಂದು ಕೇಳಿದ. ಆದದ್ದನೆಲ್ಲಾ ವಿವರಿಸಿದ ಸುಬ್ರಾಯನನ್ನು ತಮ್ಮ ಅಂಗಡಿಯೊಳಗೆ ಕರೆಸಿ ಕುಡಿಯಲು ನೀರು ಕೊಟ್ಟು , “ಭಟ್ಟ್ರೇ, ಇಂದು ಇಲ್ಲೇ ಉಳಿದುಕೊಳ್ಳಿ. ನಾಳೆ ಮನೆಗೆ ಹೋಗಿ. ಈಗ ತುಂಬಾ ರಾತ್ರೆಯಾಯ್ದು” ಎಂದು ಹೇಳಿ ಅಂದಿನ ರಾತ್ರಿ ಸುಬ್ರಾಯನಿಗೆ ರಾಂಭಟ್ಟರು ಆಶ್ರಯ ನೀಡಿದರು.

ಈ ಘಟನೆ ನೆಡೆದು ಇಂದಿಗೆ ಸರಿಸುಮಾರು ಒಂದು ೩೦ ವರ್ಷಗಳಾಗಿರಬಹುದು. ಸುಬ್ರಾಯ ಈಗ ಅದೇ ಮನೆಯಲ್ಲಿ ವಾಸವಾಗಿದ್ದಾನೆ. ಆಗೀಗ ಮೊಮ್ಮಕ್ಕಳು ಊರಿಗೆ ಬರುತ್ತಾರೆ. ಬಂದಾಗಲೆಲ್ಲ “ಅಜ್ಜ, ಒಂದು ಕಥೆ ಹೇಳೊ” ಎಂದಾಗಲೆಲ್ಲ ಆತ ಇದೇ ನೈಜ ಘಟನೆಯನ್ನ ಹೇಳ್ತಾನೆ. ಆದರೆ ಇಂದಿಗೂ ಆತನ ಪ್ರಶ್ನೆಗಳಿಗೆ ಉತ್ತರ ದೊರೆತಿಲ್ಲ. ಅಂದು ನೆಡೆದದ್ದಾದರೂ ಏನು? ಯಾರವರೆಲ್ಲ? ಒಟ್ಟಿನಲ್ಲಿ ಆತನ ಜೀವನದಲ್ಲಿ ಅದೊಂದು ಬಗೆಹರಿಯದ ಪ್ರಶ್ನೆಯಾಗಿ ಇಂದಿಗೂ ಉಳಿದುಕೊಂಡಿರುವುದರಲ್ಲಿ ಸಂಶಯವಿಲ್ಲ.

——————————————————————————–

ಇದು ನಾನು ಪ್ರಕಟಿಸುತ್ತಿರುವ ನನ್ನ ಎರಡನೇ ಕಥೆ. ನಿಮಗೆ ಕಥೆ ಇಷ್ಟವಾಗಿದ್ದಲ್ಲಿ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ ಮಾಡುವ ಮೂಲಕ ತಿಳಿಸಿ. ದಯವಿಟ್ಟು ಇದನ್ನು ನಿಮ್ಮ ಸ್ನೇಹಿತರು ಹಾಗು ಕುಟುಂಬದವರಿಗೆ ಕಳಿಸಿ ಓದಲು ಪ್ರೋತ್ಸಾಹಿಸಿ. ಇನ್ನೊಂದು ಕಥೆಯೊಂದಿಗೆ ಮತ್ತೊಮ್ಮೆ ಇಲ್ಲಿ ಹಾಜರಾಗುತ್ತೇನೆ.
ಧನ್ಯವಾದಗಳು.

Featured

The Girl on the Train by Paula Hawkins : A book review.

Image

Genre: Fiction, Suspense, Thriller, Mystery
Author: Paula Hawkins
Rating -5/5🌟

What an amazing suspense thriller it was! Indeed a page-turner by itself. I had never read something so compelling as this one. Finishing a novel at 2.30 in the night, a day before final practicals was an adventure in itself😋😬
I did not even know how I completed it in such a small span of time amidst my exams. It was truly a gripping story. ‘You don’t know her, but she knows you- This is enough to catch my eyes, and a chill runs down my spine with the very idea of the statement. There’s a lot of scope for imagination. In a moment the whole perspective can change, right becomes wrong, and good turns to evil. Excellent storytelling could hold the readers to the point clutched to the book anticipating what would happen in a minute, a few pages ahead. There were times when I was reading it without taking a breath and was on the edge of my seat. You can imagine the level of curiosity it might have created in me. A lot of plot twists and an unbelievable climax, an OMG moment😳😱
Among many other great things, I chanced upon a word that I call word vocabulary for this read of mine.
📌 ‘Snivelling’- crying and sniffing in a feeble or fretful way. I am hoping to use this word in all my future writings and hope you have added this word to your mental dictionary 😂
Definitely, one of my favorite books and I would tell people to read if they ask me for book recommendations.🤪😁
Highly recommended! Do read it if you can..it’s just 🤌🏻👌🏻
Keeping this review short and sweet with no spoilers.

P.S. Special thanks to my best friend Sadhvi for this book recommendation and for lending me her book.

P.S 2 Updating the book review here which I wrote a month ago on another platform.

Thanks a lot for your patience and for reading it till the very end


If you like this review, please hit a like, read the book and enjoy!!


Share it with your bibliophile friends and do comment down below what your thoughts are and if you want to read the book.

Kindly consider subscribing to my page for more amazing content and book reviews that are coming up.

Until next time, take care;
Bye:)

Featured

ಕನಸು-ನನಸಿನಾಟ

ಪ್ರತಿಯೊಬ್ಬರ ಜೀವನದ ಕಥೆ

“ಓಹೋಯ್!‌ ಎಂತ ಮಾಡ್ತಿದ್ದೆ? ಉಂಡಾತ?” ಎಂದು ಕೇಳಿದಾಗ ಎಚ್ಚರದ ಸ್ಥಿತಿಗೆ ಬಂದಳು ಸೌಮ್ಯ. ‘ಬಿ.ಇ.ಎಲ್‌’ ಬ್ಯಾಂಕಿನ ಉದ್ಯೋಗಿಯಾಗಿದ್ದ ಸೌಮ್ಯಾಳಿಗೆ ರೈಲು ಪ್ರಯಾಣ ಹೊಸತೇನಾಗಿರಲಿಲ್ಲ. ಹೀಗೆ ಬೆಂಗಳೂರಿನಿಂದ ತನ್ನ ಹುಟ್ಟೂರಾದ ಹೊನ್ನಾವರಕ್ಕೆ ರೈಲಿನಲ್ಲಿ ಹೋಗಿತ್ತಿರಬೇಕಾದ್ರೆ ಅವಳ ಸಹೋದ್ಯೋಗಿ ಮತ್ತು ತನ್ನದೇ ಊರಿನವನಾದ ಶೇಖರ್‌ ಆ ಪ್ರಶ್ನೆ ಕೇಳಿದಾಗ ಅವಳು ಚಿಂತನಾ ಲೋಕದಿಂದ ಈ ಪ್ರಪಂಚಕ್ಕೆ ಬಂದಳು.

“ಎಂತದು ಇಲ್ಲೆ, ಹೀಗೆ ಹಳೇದನ್ನ ಯೋಚನೆ ಮಾಡ್ತೇ ಇದ್ದೆ. ಹಾ! ಮತ್ತೆ ನಂದು ಉಂಡಾತೋ ಮಾರಾಯ!” ಎಂದು ಹೇಳಿದಾಕೆ ಮರಳಿ ರೈಲಿನ ಕಿಟಕಿಯಿಂದಾಚೆಗೆ ನೋಡತೊಡಗಿದಳು.

ಕರ್ನಾಟಕ ಸಾಂಸ್ಕೃತಿಕ ಕಲೆಗಳಿಗೆ ತವರೂರು. ಕನ್ನಡವೆಂಬುದು ಇಲ್ಲಿನ ಜೀವಾಳವಿದ್ದಂತೆ. ಅಂತಹ ಕನ್ನಡದಲ್ಲೇ ನಾನಾ ಬಗೆಯಿದ್ದು, ಅಂತಹ ಒಂದು ಪ್ರಕಾರವೇ ಹವ್ಯಕ ಕನ್ನಡ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಮಂಗಳೂರು ಕಡೆಗೆ ಹೋದರೆ ಅಲ್ಲಿನ ಜನರು ಈ ರೀತಿಯ ಕನ್ನಡ ಭಾಷೆಯ ಪದಪ್ರಯೋಗ ಮಾಡೋದನ್ನ ಗಮನಿಸಬಹುದು.

ಹುಟ್ಟಿದ್ದು ಶಾರದಾ ನರ್ಸಿಂಗ್‌ ಹೋಮ್‌, ಕರ್ಕಿ, ಉತ್ತರಕನ್ನಡ ತಾಲೂಕಿನಲ್ಲಾದರೂ ಬೆಳೆದದ್ದೆಲ್ಲ ಉದ್ಯಾನನಗರಿ ಬೆಂಗಳೂರಿನಲ್ಲೇ. ಆದರೂ ಸೌಮ್ಯಾಳಿಗೆ ಆ ಹವ್ಯಕ ಭಾಷೆಯ ಮೇಲೆ ಅಷ್ಟು ಬಿಗಿ ಹಿಡಿತವಿತ್ತು. ಸ್ಪಷ್ಟವಾಗಿ, ಸ್ಫುಟವಾಗಿ, ಕನ್ನಡ ಮಾತಾಡೋದ್ರಲ್ಲಿ ನಮ್ಮ ಸೌಮ್ಯಾ ಎತ್ತಿದಕೈ. ಉದ್ದವಾದ, ನೀಳ ಕಪ್ಪು, ಸುಂದರ ಕೇಶವುಳ್ಳವಳಾದ ಸೌಮ್ಯಾ, ಮೃದು ಸ್ವಭಾವದ ಹುಡುಗಿ. ಕಷ್ಟಪಟ್ಟು ಮೇಲೇರಿದ ಪ್ರಾಮಾಣಿಕ ಸಹೃದಯಿ ಆಕೆ.

ಇಷ್ಟವಿಲ್ಲದ ವಾಣಿಜ್ಯಶಾಸ್ತ್ರ ಅಧ್ಯಯನ ಮಾಡಿ, ಅಂತೂ ಇಂತೂ ಬಿ.ಕಾಂ ಮುಗಿಸಿ, ಅವರಿವರ ಬೇಡಿ ಬ್ಯಾಂಕೊಂದರ ಕೆಲಸಕ್ಕೆ ಸೇರಿದಾಕೆ, ಆಗೀಗ ತನ್ನ ಹುಟ್ಟೂರಿಗೆ ಹೋಗುತ್ತಿದ್ದಳು. ಪ್ರತೀ ಸಲ ರೈಲಿನಲ್ಲಿ ಹೋಗುವಾಗ ಚಿಂತನಾ ಲೋಕದಲ್ಲಿ ಮುಳುಗಿರುತ್ತಿದ್ದಳು. ಎಲ್ಲಾ ರೈಲಿನ ಮಹಿಮೆಯೋ ಅಥವಾ ಅವಳ ತಲೆಯ ಚಮತ್ಕಾರವೋ ತಿಳಿಯದು. ಅವಳೊಂದಿಗೆ ಪ್ರತೀ ಸಲವೂ ಪ್ರಯಾಣಿಸುವ ಶೇಖರ್‌, ಕುತೂಹಲ ತಡೆಯಲಾಗದೆ ಈ ಬಾರಿ ಸೌಮ್ಯಾಳನ್ನು ಕೇಳಿಯೇ ಬಿಟ್ಟನು.

“ಅದೆಂತ ಸೌಮ್ಯಾ ನಿನ್ನ ಯೋಚನೆ? ರೈಲು ನಿನ್ನನ್ನು ಬುದ್ಧಿಜೀವಿ ಮಾಡತ್ತೋ ಹ್ಯಾಗೇ?” ಎಂದು ಕೇಳುತ್ತಾ ಮುಗುಳ್ನಕ್ಕನು.

“ನೀ ಯಾವತ್ತಾದರು ಕನಸು ಕಂಡಿದ್ಯೇನೋ?” ಎಂದು ಸೌಮ್ಯ ಮರುಪ್ರಶ್ನಿಸಿದಳು.ತತ್‌ಕ್ಷಣ ಮರುಪ್ರಶ್ನೆಗೆ ದಂಗಾದ ಶೇಖರನು, “ಓಹ್!‌ ಬಹಳಷ್ಟು ಕಂಡಿದ್ದೇನೆ. ಕಂಡಿದ್ದೆಲ್ಲ ನಿಜವಾಗಿದ್ದರೆ ನಾ ಎಂತಕ್ಕೆ ಹಿಂಗೆ ಇರ್ತಿದ್ದೆ” ಎಂದು ಹೇಳಿತ್ತಾ ತನ್ನ ತುಂಡಾದ ಎಡಗೈಯನ್ನು ಬಹಳ ನೋವಿನಿಂದ ನೋಡುತ್ತಾನೆ.

ಪಿ.ಯು.ಸಿ ಓದುತ್ತಿರಬೇಕಾದರೆ ನಡೆದ ಒಂದು ಅಪಘಾತದಲ್ಲಿ ಶೇಖರ್‌ ತನ್ನ ಎಡಗೈಯನ್ನು ಕಳೆದುಕೊಂಡಿದ್ದನು. ಅಂದಿನ ದಿನ ನೆನಪಿಗೆ ಬಂದರೆ, ಇಂದಿಗೂ ಭಾವುಕನಾಗಿ ಕಣ್ಣಲ್ಲಿ ನೀರು ತುಂಬಿಕೊಳ್ಳುವ ಶೇಖರನಿಗೆ, ಆ ಒಂದು ಘಟನೆಯು ತನ್ನ ಕನಸನ್ನೆಲ್ಲಾ ಒಡೆದುಹಾಕಿತು ಎಂಬ ನೋವು ಇನ್ನೂ ಇದೆ.

ಅವನ ಉತ್ತರಕ್ಕೆ ಸೌಮ್ಯಾಳು ಬೇಸರಗೊಳ್ಳುತ್ತಾಳೆ. ಆದರೆ ತನ್ನ ಆಲೋಚನೆಯ ಹೂಗಳನ್ನು ಕಿತ್ತು ಅವನ ಮನಸ್ಸಿನ ಬುಟ್ಟಿಗೆ ಹಾಕುವಂತೆ, ಒಂದೊಂದಾಗಿ ಅವಳ ಯೋಚನೆಗಳನ್ನು ಅವನಿಗೆ ಹೇಳುತ್ತಾ ಹೋದಳು.

ಎಲ್ಲರ ಮುದ್ದಿನ ‘ಪುಟ್ಟಿ’ ಸೌಮ್ಯಾ ಬಾಲ್ಯದಿಂದಲೇ ವೈದ್ಯೆಯಾಗುವ ಕನಸು ಹೊತ್ತವಳು. ಅಪ್ಪನ ಮುದ್ದು ಗೊಂಬೆಯಾಗಿದ್ದಳು. ಎಲ್ಲರಿಗೂ ಪುಟ್ಟಿಯಾಗಿದ್ದರೆ, ತನ್ನ ಅಪ್ಪನಿಗೆ ಮಾತ್ರ ಅವಳು ಪುಟಾಣಿ ‘ಪಾಪು’. ದಿನಕ್ಕೆ ಅದೆಷ್ಟು ಬಾರಿ ಅಪ್ಪ ಅವಳನ್ನು ‘ಪಾಪು’ ಅಂತ ಕರೀತಿದ್ರೋ ಅದರ ಅಂದಾಜೇ ಇರಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ಅಕ್ಕ-ತಂಗಿಯರಿಲ್ಲದ ಮನೆಯಲ್ಲಿ ಬೆಳೆದ ಸೌಮ್ಯಾಳ ತಂದೆಗೆ ಹೆಣ್ಣುಮಕ್ಕಳೆಂದರೆ ಪ್ರೀತಿ, ಗೌರವ ಹಾಗು ಆದರ. ಹೆಣ್ಣುಮಕ್ಕಳು ಹುಟ್ಟಿದೊಡನೆ ಮೂಗು ಮುರಿದು ಮೂದಲಿಸುವ ಸಮಾಜದಲ್ಲಿ ಅವರು ವಿಭಿನ್ನರಾಗಿದ್ದರು. ತಮ್ಮ ಎಲ್ಲಾ ಕನಸುಗಳನ್ನು ಮಕ್ಕಳ ಮೇಲೆ ಹೇರಿ, ಅವರು ಅದನ್ನು ಪೂರೈಸಲಿ ಎಂಬ ಆಸೆ ಹೊತ್ತ ಎಲ್ಲಾ ಪೋಷಕರಂತೆ ಸೌಮ್ಯಾಳ ತಂದೆಯೂ ಆಗಿದ್ದರು.

ಜೀವನ ಸುಗಮವಾಗಿ, ಹಾಯಾಗಿ ಸಾಗುತ್ತಿದೆ ಅನ್ನೋವಾಗ್ಲೆ ಸಿನೆಮಾಗಳಲ್ಲಿ ಖಳನಾಯಕನ ಪ್ರವೇಶವಾಗುವಂತೆ, ಸೌಮ್ಯಾಳ ಬದುಕಿನಲ್ಲಿ ಕೂಡ ಒಂದು ಮುಖ್ಯ ಘಟನೆ ಜರುಗಿತು. ಅದು ಅವಳ ಬದುಕನ್ನೇ ಬದಲಾಯಿಸಿತು. ಪ್ರತೀ ದಿನದಂತೆ ಶಾಲೆಗೆ ಹೋಗಿ ಮನೆಗೆ ವಾಪಸ್ಸಾದರೆ. ಅವಳಿಗೊಂದು ಆಘಾತ ಕಾದಿತ್ತು. ಕೆಲಸಕ್ಕೆ ಹೋದ ತಂದೆ ಹುಷಾರಿಲ್ಲವೆಂದು ಮಂಚದ ಮೇಲೆ ಮಲಗಿದ್ದರು. ಥಟ್ಟನೆ ಆರೋಗ್ಯವೇಕೆ ಹದಗೆಟ್ಟಿತು ಎಂದು ಆ ಪುಟ್ಟ ಹುಡುಗಿಯಾಗಿದ್ದ ಸೌಮ್ಯಾ ಯೋಚನೆ ಮಾಡಿ ದೇವರಲ್ಲಿ ತನ್ನ ತಂದೆ ಗುಣವಾಗಲಿಯೆಂದು ಬೇಡಿಕೊಂಡಳು. ಆಸ್ಪತ್ರೆಗೆ ಕರೆದುಕೊಂಡು ಹೋದ ತನ್ನ ಅಪ್ಪನನ್ನು ಒಮ್ಮೆ ನೋಡಿಕೊಂಡು ಬಂದು ಪುನಃ ಶಾಲೆಗೆ ಹೋದವಳು ಮತ್ತೆ ಅಪ್ಪನನ್ನು ಜೀವಂತವಾಗಿ ನೋಡಲೇ ಇಲ್ಲ.

ಶಾಲೆಯಿಂದ ವಾಪಸ್ಸಾದಾಗ ಮನೆಯ ಮುಂದೆ ಸಾಗರದಷ್ಟು ಜನ ಸೇರಿದ್ದರು. ಪರಿಸ್ಥಿತಿಯ ಅರಿವಿಲ್ಲದ ಮುಗ್ಧ ಹುಡುಗಿ, ಅಪ್ಪನ ಸಾವಿನ ಮೌನವನ್ನು ಅರಗಿಸಿಕೊಳ್ಳಲು ಸ್ವಲ್ಪ ದಿನಗಳನ್ನು ತೆಗೆದುಕೊಂಡಳು. ಅವಳ ತಂದೆ ಮಾಡಿದ ದಾನ, ಧರ್ಮ, ಸಹಾಯಗಳ ಫಲವಾಗಿ ಅವಳಿಗೂ ಎಲ್ಲರಿಂದ ಸಹಾಯ ಒದಗಿಬಂದು ಶಿಕ್ಷಣ ಪಡೆದುಕೊಳ್ಳಲು ನೆರವಾಯಿತು.

ಈ ಒಂದು ಘಟನೆ ಅವಳ ಬಾಲ್ಯದ ಕನಸನ್ನೇ ಮರೆಯುವಂತೆ ಮಾಡಿದ್ದು ವಿಷಾದದ ಸಂಗತಿ. ಆದರೆ ಜೀವನವೆಂಬ ಪಯಣದಲ್ಲಿ ನಮಗೆಂದೇ ಒಂದು ದಾರಿಯಿರುತ್ತಂತೆ. ಅಂದುಕೊಂಡದ್ದು ಸಿಗದಿದ್ದರೂ, ಸಿಕ್ಕಿದ್ದನ್ನು ಆದಷ್ಟು ಉಪಯೋಗಿಸಿಕೊಳ್ಳೋದು ಅತಿಮುಖ್ಯವೆಂದು ಆಕೆಯ ತಾಯಿ ಸದಾ ಹೇಳುತ್ತಿದ್ದರು.

ಸ್ವಲ್ಪ ವರ್ಷಗಳ ಹಿಂದೆಯಷ್ಟೇ ಆಕೆ ಒಂದು ಸಂಗೀತ ಕಛೇರಿಗೆ ಹೋಗಿದ್ದಳು. ಅಂಧಳಾದ ಹುಡುಗಿಯೊಬ್ಬಳು ವೀಣೆಯನ್ನು ನುಡಿಸುತ್ತಿದ್ದಳು. ತಾನೂ ಎಲ್ಲರಂತೆ ಬಣ್ಣಗಳನ್ನು ಕಾಣಬೇಕು, ಮೆರಗನ್ನು ಕಣ್ತುಂಬಿಕೊಳ್ಳಬೇಕೆಂದು ಆ ಹುಡುಗಿಗೂ ಅನ್ನಿಸಿರಬಹುದು. ಅದುವೇ ಅವಳು ಬಾಲ್ಯದಲ್ಲಿ ಕಂಡ ಕನಸಾಗಿರಬಹುದು. ಆದರೆ ಅದೊಂದೇ ನ್ಯೂನತೆ ಅವಳ ಸಾಧನೆಗೆ ತೊಡಕಾಗಲಿಲ್ಲ. ಇವುಗಳನ್ನೆಲ್ಲಾ ಯೋಚಿಸಿದ ಸೌಮ್ಯಾ ಅದನ್ನು ತನ್ನದೇ ಬದುಕಿಗೆ ಸಾಮ್ಯತೆಗೊಳಿಸುತ್ತಾ ಆಳವಾಗಿ ಚಿಂತಿಸುತ್ತಿದ್ದಳು. ಅದೇ ತನ್ನ ಚಿಂತನೆಗೆ ಕಾರಣವೆಂದು ಹೀಳಿಕೊಂಡ ಸೌಮ್ಯಾಳ ಮಾತುಗಳು ಶೇಖರನನ್ನೂ ಆಲೋಚನೆ ಮಾಡುವಂತೆ ಮಾಡಿತು.

“ಹೌದಲ್ವೆ, ನಾನು ಈ ರೀತಿ ಯೋಚನೇನೇ ಮಾಡಿರಲಿಲ್ಲ” ಎಂದ ಶೇಖರ.

ಬಾಲ್ಯದ ಕನಸು ನನಸಾಗದಿದ್ದರೇನಂತೆ, ಬೇರೊಂದು ಕನಸು ಕಾಣಬೇಕು. ಅದನ್ನು ನನಸಾಗಿಸಿಕೊಳ್ಳಬೇಕು. ಕನಸು ಕಾಣಲು ಹಣವೇನು ಕೊಡಬೀಕಾಗಿಲ್ಲವಲ್ಲ:)

ಅಂದುಕೊಂಡದ್ದು ಸಿಗದಿದ್ದಾಗ, ಸಿಕ್ಕಿದ್ದರಲ್ಲೇ ಹೆಸರು ಮಾಡಬೇಕು. ಹಾಗಾಗಿ “ನಾ ಕೆಲಸ ಬಿಡ್ತೆ. ಇನ್ನೂ ಹೆಚ್ಚು ಓದಿ ಮ್ಯಾನೇಜರ್‌ ಆಗಲು ಬರೆಯಬೇಕಾದ ಪರೀಕ್ಷೆ ಬರೆದು ನನ್ನದೇ ಕ್ಷೇತ್ರದಲ್ಲಿ ಮುಂದುವರೀತೆ. ಅದನ್ನೇ ಯೋಚನೆ ಮಾಡ್ತಿದ್ದೆ ಆಗ್ಲಿಂದ” ಎಂದ ಸೌಮ್ಯಾಳಿಗೆ ಶೀಖರ್‌ ಆತ್ಮವಿಶ್ವಾಸ ತುಂಬಿಸಿಕೊಳ್ಳಲು ಸಲಹೆ ನೀಡಿದ. 

ಮುಂದಿನ ರೈಲಿನ ಪ್ರಯಾಣದಲ್ಲಾದರೂ ಆ ಕಿಟಕಿಯಿಂದಾಚೆಗಿನ ಚಿಂತನಾ ನೋಟಕ್ಕೆ ಬ್ರೇಕ್‌ ಬಿದ್ದೀತು………

P.S. ಅಂತರ್ಕಾಲೇಜು ಮಟ್ಟದಲ್ಲಿ ನನಗೆ ದ್ವಿತೀಯ ಬಹುಮಾನ ತಂದುಕೊಟ್ಟ ನನ್ನ ಮೊದಲನೆಯ ಕನ್ನಡದ ಸಣ್ಣ ಕಥೆಯನ್ನು ಓದಿದ ನಿಮ್ಮೆಲ್ಲರಿಗೂ ಧನ್ಯವಾದಗಳು.
ನನಗೆ ಕಥೆ ಬರೆಯುವಂತೆ ಉತ್ತೇಜನ ನೀಡಿ ಸದಾ ಪ್ರೋತ್ಸಾಹಿಸುವ ನನ್ನ ಕನ್ನಡ ಪ್ರಾಧ್ಯಾಪಕಿ ಹಾಗು ನನ್ನ ಅಚ್ಚುಮೆಚ್ಚಿನ ಗುರುಗಳಾದ ಶ್ರೀರಂಜಿನಿ ಮಾಮ್ಗೆ ನನ್ನ ಹೃತ್ಪೂರ್ವಕ ವಂದನೆಗಳು.
ನನಗೆ ಸದಾ ಪ್ರೀತಿಯಿಂದ ಮಾರ್ಗದರ್ಶನ ನೀಡುವ ಸೊಗಸಾಗಿ ಪದ್ಯ, ಲೇಖನ ಹಾಗು ಕಥೆಗಳನ್ನು ಬರೆಯುವ ಲೇಖಕಿಯಾದ ನನ್ನ ಕಾಲೇಜಿನ ಸೀನಿಯರ್‌, ನನ್ನ ಪ್ರೀತಿಯ ಶಾರದಕ್ಕನಿಗೂ ನನ್ನ ವಂದನೆಗಳು.

Featured

Life is what you make it

A story of love, hope, and how determination can overcome even destiny


Genre: Fiction
Author: Preeti Shenoy
Price: Rs.150/-

Rating: Image

Image
The book I love the most with a cute little Bookmark by me:)


‘Life is what you make it’ is a fictional piece of awesomeness that tells the tale of a girl named Ankita Sharma.
Once a star student of St.Agnes college, cracking MBA entrance and getting a prestigious institute for higher studies and topping the IT internals of MBA and who was well off in every way ends up in the ‘National Institute of Mental Health(NIMH) to recover from severe depression and Bipolar disorder after being a survivor of 2 suicide attempts. There was something that happened in her life that changed her completely into a new person. She finds Love, Faith, and Friendship to be very powerful and how they work wonders and proves how strong determination can even change destiny. The book focuses on the importance of Mental health and also points out to the fact that it is still a ‘Taboo’ and not taken or spoken that seriously or easily. It enlightened me about Mental health, Bipolar disorder in so many ways.

If a person is sick with some sort of disease, he/she is considered unwell. But that is not the same with Mental health. We can never come to know what a person is going through and can never gaze through the turmoil they are having inside. A person may look happy, sane, and perfectly alright from the outside, but the pain they might be going through is unexplainable and can only be felt by them. I love how the author through Dr.Madhusudhan’s character from the book went on to make us understand that going to Mental hospitals/Therapists/Psychiatrists is just as common as people with fractures going to Orthopedicians, heart diseases to cardiologists and any hospital for that matter to get treated for their ailments.


I loved every bit of the writing and the book makes you read further without any effort. There is an essence of Love and even a message for ‘Not to belittle Love’ whatsoever. ‘Ankita Sharma’ made me realise that ‘Life is too precious to not do the things one wanted to’ and states the fact that ‘Love and time are the greatest gifts that one could receive’. Her story gave me an epiphany that there are so many things that we can do and we do not take it seriously or be grateful for as we do not know its value until we can’t do it as before when she states “Sometimes we do not fully appreciate what we have unless we lose it”. How true it is!


I loved this one line from the whole book- “You don’t need an occasion to make others feel good. Life is a celebration!”


I fell in love with Preeti Shenoy’s writing, the descriptive tone, the well-built characters, the setup of the story, and each bit of it. She urges her readers like me to value ‘each day’ as it is a true gift to be cherished and be grateful for.
Preeti Shenoy warmly states that “Love, Friendship, acceptance, and hope are important, and being powered by these, one can indeed overcome anything, including Destiny”.


I admire Preeti Shenoy for not leaving her readers uninformed about other characters as she gives a proper closure to the whole novel and prepares us to read the next sequel ‘Wake Up, Life is What you Make it’ which I am excited to read!
Reading Preethi Shenoy’s book for the first time made me her fan and a lover of her writings and a reader who wants to read all of her books.
I highly recommend this book to anyone who wants to read and get motivated in life and to know more about ‘Ankita Sharma’ and her mystery of ending up in a Mental Hospital.


Thanks a lot for your patience and for reading it till the very end.


If you like this review, please hit a like, read the book and enjoy!!


Share it with your bibliophile friends and do comment down below what are your thoughts and if you want to read the book.


Kindly consider subscribing to my page for more amazing content and book reviews that are coming up.

Until next time, take care;
Bye:)

The Flower of Fulfillment

A book written by Sanath Kumar Naibhi on connecting the dots and trying to get a clearer picture of life

Image
A treasure of knowledge. If imbibed in and practiced as the author writes, it can do wonders and lead to a life of fulfillment.
Image
A fantastic book that deserves to be read by all!

This was the first ever book in the self-help genre that I have read. It so happens to me always that only novels and enthralling stories can hook me to the book. In the past I had tried to read self-help books but it was not a successful attempt. This is a special book that hooked me and that’s because of the author’s brilliant approach in writing. People of any age group love stories and the author has rightly used a great storyline to deliver his thoughts.

The topics that is been covered in the book are quite interesting and has a sense of ‘gratefulness’ in all the pages. The author says it’s a ‘personal growth’ book that everyone must start with and he is right! I as a beginner imbibed in so many useful things that I need in my life right now because it mainly focuses on the elements of life needed to live a ‘life of fulfillment’.

It covers many topics related to life and some of them were very intriguing for me and some concepts were known to me but yet I felt like reading it with a new perspective that drived away my ignorance.

Some of the concepts in the book that I was enthralled reading were:

  • Candlestick Analogy
  • Life as Energy
  • 4 elements of fulfillment
  • Awareness timeline
  • Concept of ‘FLOW’
  • An account on CREATIVITY
  • The naunces of IDEAS

The author also writes about note taking, health, wealth and even has given scientific explanations whichever concept demands it. The bonus is the ‘Notes’ section which provides the extra information which can be further pondered upon. Everything or any entity on this earth is useful only when it is used and when the knowledge gained is applied and practiced positively. The author also stresses on that fact and being one of the responsible reader, I will surely try to inculcate those values which I have read in my life wherever and whenver I need them.

Image
A signed copy by the author is a double motivation for me to read the book!

It’s the first book written by the author and it is the first of the many books he may write in the future creating a sense of awareness among his readers. I found this book very much insightful and being an art learner, I thoroughly enjoyed reading about creativity, origin of ideas, consistency, marketing, etc and it is a must read book for all the artists!

I highly urge all my peers, younger and older friends to read this book to know about the elements of fulfillment that leads to a life of clarity. The book is available on Amazon(Both e-book and a paper back is available). Since the author is a self published author, you can directly contact him for the book and discuss anything about the book and in a way you can also check out his other great works in the field of music, youtube and what not! I am leaving the links here. Do check them out!

Link to buy on Amazon. Support the budding writers by buying and reading their book:)

https://instagram.com/sanathkumar_naibhi?igshid=YmMyMTA2M2Y=

Check out the author’s profile on Instagram and connect with him for more insights about the book!

Thanks a lot for your patience and for reading it till the very end


If you like this review, please hit a like, read the book and enjoy!!


Share it with your bibliophile friends and do comment down below what are your thoughts and if you want to read the book.


Kindly consider subscribing to my page for more amazing content and book reviews that are coming up.

Until next time, take care;
Bye:)

ಪುಸ್ತಕ ವಿಮರ್ಶೆ-‘ಪಾಕಕ್ರಾಂತಿ ಮತ್ತು ಇತರೆ ಕಥೆಗಳು’

ಲೇಖಕರು- ಪೂರ್ಣಚಂದ್ರ ತೇಜಸ್ವಿ

Image
೩/೫
Image
ನಾನು ಓದಿದ ಪೂರ್ಣಚಂದ್ರ ತೇಜಸ್ವಿಯವರ ೨ನೇ ಪುಸ್ತಕ

ಎಲ್ಲರಿಗೂ ನಮಸ್ಕಾರ, ಬಹುಶಃ ನಾನು ಕನ್ನಡದಲ್ಲಿ ಬರೆದು ಪ್ರಕಟಿಸುತ್ತಿರೋ ನನ್ನ ಮೊದಲ ಪುಸ್ತಕ ವಿಮರ್ಶೆಯಿದಾಗಿದೆ. ಪೂಚಂತೆರವರು ನನ್ನ ಅಚ್ಚುಮೆಚ್ಚಿನ ಲೇಖಕರು. ಅವರ ‘ಕಿರಗೂರಿನ ಗಯ್ಯಾಳಿಗಳು’ ಕಥಾಸಂಕಲನವನ್ನು ನಾನು ಮೊದಲು ಓದಿದ್ದು. ಅಲ್ಲಿಂದ ಅವರ ಬರವಣಿಗೆಗೆ ಮಾರುಹೋಗಿದ್ದೀನಿ ನಾನು. ತಿಂಗಳ ಹಿಂದೆ ಶುರು ಮಾಡಿದ ಪುಸ್ತಕವನ್ನು ಓದಿ ಮುಗಿಸೋಕೆ ಇಂದು ಮುಹೂರ್ತ ಸಿಕ್ಕಂತಾಯ್ತು.

‘ಪಾಕ‌ಕ್ರಾಂತಿ ಮತ್ತು ಇತರೆ ಕಥೆಗಳುʼ ಅದ್ಭುತ ಕಥೆಗಳ ಸಂಗ್ರಹ. ಪುಸ್ತಕದ ಸುಮಾರಷ್ಟು ಭಾಗ ಪಾಕಕ್ರಾಂತಿ ಕಥೆಯಿದ್ದು, ಅದು ಈ ಪುಸ್ತಕದ ಆಕರ್ಷಣೆಯಂತಲೇ ಹೇಳಬಹುದು. ಹೊಟ್ಟೆ ತುಂಬಾ ನಗಿಸಿ, ಮನಸ್ಸು ತುಂಬಾ ಮನೋಲ್ಲಾಸ ತುಂಬುವಂತಹ ಕಥೆಯಿದು. ಲೇಖಕರ ಅರ್ಧಾಂಗಿ ಊರಿನಲ್ಲಿರದೇ ಇದ್ದಾಗ ಅಡುಗೆಮನೆಯನ್ನೇ ತಮ್ಮ ಪ್ರಯೋಗಶಾಲೆಯಾಗಿ ಮಾಡಿಕೊಂಡು, ಕ್ರಾಂತಿ ಮಾಡಬಹುದಾದ ವಿಚಾರದಂತೆ ಅದರ ಕುರಿತಾಗಿ ಹಲವಾರು ವಿಷಯಗಳನ್ನು ಬಹಳ ಹಾಸ್ಯವಾಗಿ ರಚಿಸುತ್ತಾ ಹೋಗಿದ್ದಾರೆ.

ನಮ್ಮ ಜೀವನದಲ್ಲಿ ಹಲವಾರು ಘಟನೆಗಳು ಘಟಿಸುತ್ತಾ ಇರ್ತಾವೆ, ಆದರೆ ನಾವು ಅದರ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಆದರೆ ನಾನು ಓದುಗಳಾಗಿ ಪೂಚಂತೆರವರ ಬರವಣಿಗೆಯಲ್ಲಿ ಗಮನಿಸಿದ್ದೇನೆಂದರೆ, ಸಾಮಾನ್ಯವಾಗಿ ನಮ್ಮಂತವರಿಗೆ ಕ್ಷುಲ್ಲಕ ಅಥವಾ ಸಣ್ಣದೆನಿಸಬಹುದಾದ ವಿಷಯಗಳನ್ನೂ ಕೂಡ ಅವುರ ಅತ್ಯಾಸಕ್ತಿ ಉಂಟುಮಾಡುವಂತೆ ಬರೆಯುತ್ತಾರೆ. ಪ್ರತಿಯೊಂದರಲ್ಲೂ ಕಥಾವಸ್ತು ಹುಡುಕುವ ‘ಜಾಣ ಕಥೆಗಾರʼ ಅವರು.

ಪುಸ್ತಕದಲ್ಲಿ ಪಾಕಕ್ರಾಂತಿಯನ್ನೂ ಸೇರಿಸಿ ಒಟ್ಟು ೧೨ ಕಥೆಗಳಿವೆ. ನನಗೆ ಬಹಳ ಇಷ್ಟವಾದ್ದೆಂದರೆ ಪಾಕಕ್ರಾಂತಿ, ನಗು ಮತ್ತು ವನ ವರಾಹಗಳು ಎಂಬುವ ಮೂರು ಕಥೆಗಳು.

ನಗು ಎಂಬುದು ಸರಿಯಾದ ಸಮಯದಲ್ಲಿ ಬಂದರೆ ಮಾತ್ರ ಶೋಭೆ. ರಾಂಗ್‌ ಟೈಮಿನಲ್ಲಿ ನಕ್ಕು ಕಿಟ್ಟು ಹೇಗೆ ಸರಳಾ ಆಂಟಿಯ ಹತ್ರ ಸಿಕ್ಕಿಕೊಂಡು ದೊಡ್ಡ ಪಾಠವೊಂದನ್ನು ಕಲಿತ ಎಂಬುದನ್ನು ಲೇಖಕರು ವಿವರಿಸಿದ್ದಾರೆ. ಕಥಾವಸ್ತು ಭಾಳ ಸಿಂಪಲ್ಲ್‌, ಆದರೆ ಆ ಒಂದು ಕಥೆ ನನ್ನ ಯೋಚನಾಲಹರಿಯನ್ನು ಬಹಳವಾಗಿ ಬಡಿದೆಬ್ಬಿಸಿತು.

ಮಲೆನಾಡು ಪ್ರದೇಶಗಳಲ್ಲಿ ಜನ ಕೈಗೊಳ್ಳುವ ಶಿಕಾರಿಯ ಕುರಿತಂತೆ ಬರೆದಿರುವ ರೋಚಕ ಕಥೆ- ವನ ವರಾಹಗಳು. ಬಸ್ನಲ್ಲಿ ಕೂತು ಪುಸ್ತಕ ಓದೋ ಅಭ್ಯಾಸವಿರುವ ನನಗೆ, ಈ ಕಥೆಯನ್ನು ಓದುತ್ತಿದ್ದಂತೆ, ಬಸ್ಸನ್ಕನೇ ಮರೆತು, ಮಾನಸಿಕವಾಗಿ ನಾನು ಕೂಡ ಆ ಶಿಕಾರಿ ನಡೆಯುವ ಸ್ಥಳಕ್ಕೆ ಹೋಗಿಬಂದಂತಾಯ್ತು. ಮುಂದೇನಾಗಬಹುದೆಂಬ ಕುತೂಹಲ ನನ್ನನ್ನು ಆವರಿಸಿತ್ತು. ಒಂದು ಉತ್ತಮ ಥ್ರಿಲ್ಲರ್‌ ಸಿನೆಮಾ ನೋಡಿದಂತಾಯ್ತು, ಈ ಕಥೆ ಓದಿ.

ಕೆಲವೊಂದು ಕಥೆಗಳು ಆಳವಾಗಿ ಚಿಂತಿಸಬಹುದಾದ ಕಥಾವಸ್ತುವನ್ನು ಹೊಂದಿದ್ದು ನನಗೆ ಅವುಗಳನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾಗಿದ್ದರಿಂದ ಓದುವಾಗ ಅಲ್ಲಲ್ಲಿ ಕೊಂಚ ನಿರುತ್ಸಾಹವುಂಟಾಯಿತು.

ಕೊನೆಯದಾಗಿ ನಾನು ನಿಮಗೆಲ್ಲ ಹೇಳೋದೇನಂದರೆ, ಪಾಕಕ್ರಾಂತಿ ಕಥೆಯಿಂದ ಮನಸ್ಸಿನಿಂದ ಬಹಳವಾಗಿ ನಗಬಹುದು. ತೇಜಸ್ವಿಯವರ ಬರವಣಿಗೆಯ ಸೊಬಗು ಆನಂದಿಸಬೇಕಾದಲ್ಲಿ, ಈ ಪುಸ್ತಕ ಖಂಡಿತ ಓದಲೇಬೇಕಾಗಿರುವಂಥದ್ದು.

ಇನ್ನೊಂದು ಕನ್ನಡ ಪುಸ್ತಕವನ್ನು ಓದಿ ಮತ್ತೆ ನಿಮ್ಮ ಮುಂದೆ ಅದರ ವಿಮರ್ಶೆಯ ಜೊತೆ ಬರ್ತೀನಿ. ಅಲ್ಲಿಯವರೆಗೆ ನೀವು ಈ ಪುಸ್ತಕವನ್ನ ಓದಕ್ಕೆ ಮರೀಬೇಡಿ.

ಕಥೆಗಳನ್ನು ಓದುವ ಹವ್ಯಾಸವಿರುವ, ಕನ್ನಡ ಸಾಹಿತ್ಯದ ಮೇಲೆ ಒಲವಿರುವಂತ ನಿಮ್ಮ ಬಂಧು-ಮಿತ್ರರೊಂದಿಗೆ ಈ ಪುಸ್ತಕ ವಿಮರ್ಶೆಯನ್ನು ಶೇರ್‌ ಮಾಡಿ. ಓದಿ ಹೇಗನ್ನಿಸಿತು ಎಂದು ಕಾಮೆಂಟ್ಗಳ ಮೂಲಕ ತಿಳಿಸಿ. ವಿಮರ್ಶೆ ಇಷ್ಟವಾದಲ್ಲಿ ಲೈಕ್‌ ಮಾಡಿ ಹಾಗು ಇನ್ನೂ ಹೆಚ್ಚೆಚ್ಚು ಕನ್ನಡ ಬರವಣಿಗೆಗಳು ಹಾಗು ಪುಸ್ತಕ ವಿಮರ್ಶೆಗಳಿಗಾಗಿ, ನನ್ನ ಈ ಪೇಜ್ನ ಸಬ್ಸ್ಕ್ರೈಬ್‌ ಮಾಡಿ, ಚಂದಾದಾರರಾಗಿ.

ಧನ್ಯವಾದಗಳು!

Wake Up, Life is Calling

A sequel to LIFE IS WHAT YOU MAKE IT

Genre: Fiction
Author: Preeti Shenoy
Price: Rs.199/-

Rating: Image

Image

A rollercoaster ride of emotions!

Immedietly after finishing the book ‘Life is what you make it’ I had this urge to read its sequel ‘Wake Up, Life is Calling’ too. Such was the immense storyline woven by Preeti Shenoy that I could not hold my curiosity anymore. The best thing was I got a limited edition book signed by Preeti Shenoy herself!! I was overjoyed seeing that note:)

Image
Elated and happy seeing her note and sign:)

This was a book full of emotions and self realisations. Ankita Sharma, a determined, a mighty young lady fought bipolar disorder and all the negativity within herself and emerged triumphant after being in NMHI. But what followed after that is been told in this book. When the life seems to be going well in full swing, her dark memories kept coming back to her and there is a relapse of her mental illness but this time it was a bit different.

She was doing well in the course that she had taken up with interest, but the appearnace of a person she thought would never come into her life again and also a small book that she discovers in the library while searching for an other book triggers her past memories. She had to go through a lot of hardhips and battled hundereds of thoughts in her head, but this time she had the support of her parents and her beloved professor.

I loved how her father supported her and there are some good phrases from the book that I have to mention. ” Things are only as terrible or as wonderful as we imagine them to be. Always prepare for the worst, but hope for the best” This phrase surely motivates me. Mrs. Hayden, Ankita’s professor says “Discovering old book you once read is like meeting an old friend after long time”. What a wonderful thought it is!

Ankita pens down her learning, in a small book and named it as ‘Life’s Little Notes’ which are worth reading and practicing in our lives. Who was that person reappeared in her life? What was that mysterious book? How did her professor help her rise like phoenix? Why was it a rollercoater ride of emotions? To get the answers for all these questions, I highly recommend you to read the book. You will be hooked to the book as I was.
I also discoverd the author’s clever wisdom and intelligence in naming of each the chapters.(You should read the book till the very end to discover this fact!)

Overall, I just loved this book and enjoyed reading it and felt all the emotions put out there. Only an expressive author like Preeti Shenoy could bring this joy to her readers like me.

Thanks a lot for your patience and for reading it till the very end


If you like this review, please hit a like, read the book and enjoy!!


Share it with your bibliophile friends and do comment down below what are your thoughts and if you want to read the book.


Kindly consider subscribing to my page for more amazing content and book reviews that are coming up.

Until next time, take care;
Bye:)

Lost Childhood

A poetry on the most bothering aspect of a fictional girl’s life.

Cherishable memories

Image

A nineteen-year-old girl who had lost her dear father when she was just 9 years old, recalls the days that were spent with him and feels how her childhood was lost with the passing away of her father, and ‘you’ here refers to her father. Her bittersweet experiences is been expressed in this poem with a heartfelt note for her long demised father.

Those days were joyful with you,
love and affection were abundant
little things mattered a lot…
but you were above all.
Life was at its pace until you left me.
hard times were yet to come they said…
When children of my age laughed and played,
I cried tears of pain sitting in a corner.
Others went to picnic with their parents
while I took your memories everywhere
Kids enjoyed rides on their parent’s scooter
but I spent my childhood being independent.
Hide and seek was a merry for them
but it was a fear for me to think I would lose
any of my loved ones like you.
I witnessed your last rights while others
Went out to watch a movie…
‘Why did you leave me?’, a question that haunts me.
All my childhood was spent in sorrow,
Your loss made me lose my childhood.
You promised me you would come back,
you came back..not as my lively father
But as an immovable ‘body’ without life.
Lost childhood can never come back,
But the memories that I lived with
can surely be cherished…
It is the only gift I have.


-Your loving daughter living
with your memories, ranting
about ‘lost childhood’


How did you feel after reading this poetry? Let me know your thoughts or feelings through your valuable comments. I hope you liked this one. If yes, do hit a like and support budding writers like me.
Until next time, BYE!

Fear tale

My original short story directly landing from creative box called brain

She was all excited and cheered up once she got to know that she is visiting her native after 5 long years. What’s more thrilling was it was her first solo journey or a small trip that she never imagined she would ever do. The journey was to a land of mysteries and suspense. Mornings are beautiful, scenic and refreshing, while the afternoon are with silence and scorching heat. Evenings are more calm and filled with scents from the flowers that bloom with the departure of sun. The creepy time is when the moon comes up and the whole surrounding slows down with less of human interaction, and more of insects sounds and strange silence.

So, Who was ‘she’ ? where was ‘she’ ? and what was so mysterious about the place?

She was kamala, a young overthinking lady with lots of mood swings and highly spiritual and god loving devotee.

She was in a place called ‘kanminke’ with an old brick house which was a place where her ancestors lived and presently been taken care of her old grandparents. It is known for its mysterious activities, and unnamed phenomena and spooky sounds though it is a land of scenic beauty with greenery all over and that too it will be abundant in rainy season. It was that that time when she visited that place.

It was not too late in the evening when she heard a strange noise that she heard from a distance. Usually being a person who always liked to be in a comfortable position with ears plugged in with earphones, that one strange noise awakened her and the sound also surpassed her songs playing in her ears. Mind is such a beautiful creation by god is what all we think but she thinks it’s a machine with too many doubts and hundreds of useless thoughts and doubts. Infact it is obvious for overthinkers like her to feel so. But what if the mind was thinking right today? Was it a fox howling or a dog? Is there a possibility of a monster residing in the hills up the mountain who is calling someone for its attention? Is it the guardian angel who protects the village about which Reshma told that day?
A series of questions and speculations popped up in her so called overthinking brain.

She tried to ignore that and the sound was also lowering eventually. After this strange scenario she thought of lying down for a bit and started gazing at the ceiling made up of bricks. Even the slightest of movement by a house lizard could have freaked her to death. All alone in the ancestral house, she was left at the mercy of god that she believed in.

Why was she all alone though she had grandparents living with her?

Check out future blogs to find out about the same. Let me know all your views after reading this story.
Happy reading!
Until next time, BYE:)

Design a site like this with WordPress.com
Get started